Friday, November 17, 2006

ಹೃದಯದಂಗಳದ ಹೂವು



ನನ್ನೆದೆಯಲ್ಲರಳಿದೆ ಒಂದು ಮುದ್ದಾದ ಹೂವು
ಧಾರೆ ಎರೆದಿದೆ ನನಗದರ ಸಂಪೂರ್ಣ ಒಲವು
ಅಗಾಧವಾಗಿದೆ ಆತನ ಪ್ರೀತಿಯ ಪೂರ
ಸವಿದಷ್ಟೂ ಮುಗಿಯದಿದರ ಮಧುರ

ನಾನತ್ತರೆ ಆತ ನರಳುತ್ತಾನೆ
ನಾ ನಕ್ಕರೆ ಅರಳುತ್ತಾನೆ
ನನಗೆ ಕೇಡಾದರೆ ಆತ ಕೆರಳುತ್ತಾನೆ
ನನಗೆ ನೋವಾದರೆ ತೊಳಲುತ್ತಾನೆ

ನಾ ಮುನಿದರೆ ಮುದ್ದಾಗಿ ನಗುತ್ತಾನೆ
ನನ್ನಾಸೆಗಳ ಪೂರೈಸಿ ನಲಿಯುತ್ತಾನೆ
ಬದುಕಿನಲಿ ಬಣ್ಣಗಳ ತುಂಬುತ್ತಾನೆ
ನನ್ನ ಗುರಿ ಮುಟ್ಟಿಸಲು ಗರಿಗೆದರುತ್ತಾನೆ

ನನ್ನೇಳಿಗೆ ನೋಡಿ ಪುಟ್ಟ ಮಗುವಿನಂತೆ ಹರ್ಷಿಸುತ್ತಾನೆ...
ತನ್ನ ತಾ ಸವೆಸಿ ನನ್ನ ಬದುಕಿಗೊಂದು ಅರ್ಥ ನೀಡುತ್ತಾನೆ.

ನನ್ನೆದೆಯಲ್ಲರಳಿದ ಸುಂದರವಾದ ಹೂವು ಇವನು
ಪಸರಿಸಿದ ನನ್ನ ಮೈಮನಗಳಲಿ ಪ್ರೀತಿಯ ಪರಿಮಳವನು

ನಾ ಬಯಸಿದ್ದೆ ಇಂಥದೊಂದು ಪವಿತ್ರ ಪ್ರೇಮವನು
ಕೊನೆಗೂ ನಾ ಗಳಿಸಿದೆ ಅಂಥದೊಂದು ವರವನು

6 comments:

Anonymous said...

ಖಜಾನೆಯ ಹೃದಯದಂಗಳದಲ್ಲರಳಿದ ಸುಂದರವಾದ ಹೂವು.

Anonymous said...

ವಾಹ್ ವಾಹ್ - ಮನ ಮುಟ್ಟುವಂತಹ, ಹೃದಯವನ್ನು ತಟ್ಟೆಬ್ಬಿಸಿದ ಕವನ. ಕವಯಿತ್ರಿಗೆ ಹಾರ್ದಿಕ ಶುಭ ಆಶಯಗಳು. ಕಾವ್ಯ ಕೃಷಿ ಮುಂದುವರೆಯಲಿ.

Annapoorna Daithota said...

ಧನ್ಯವಾದಗಳು ಅನ್ವೇಷಿ ಹಾಗೂ ತವಿಶ್ರೀ ಯವರಿಗೆ....

Susheel Sandeep said...

adEkO kAvya-kRuShi padavidda kaDegellA nangE tiLiyadaMte nanna kaNNugaLu baMdu OdibiDuttave! :)
kavana cennAgide...nimma manadaMgaLadallaraLida hoovige nimma BAvanegaLu khaMDitA talupive aMdukoLLuttEne ;)

Shiv said...

ಮುದ್ದಾಗಿದೆ ಹೃದಯದಂಗಳದ ಹೂವು..
ನಿಮ್ಮ ಪ್ರೀತಿಯ ಪಯಾಣ ಬಾಳಿನುದ್ದಕ್ಕೂ ಹೀಗೆ ಸಾಗಲಿ..
ಪ್ರೀತಿಯ ಹೂವು ಸುವಾಸನೆ ಹರಡಲಿ..

Annapoorna Daithota said...

ಧನ್ಯವಾದಗಳು ಸುಸಂಕೃತ ಹಾಗೂ ಶಿವಶಂಕರ್..... [:)]