ಈಕೆ...
ಎಲ್ಲರೊಡನೆ ಬಾಯ್ತುಂಬ ಮಾತಾಡುತ್ತಾಳೆ
ನಗುತ್ತಾಳೆ, ನಲಿಯುತ್ತಾಳೆ
ನನ್ನೊಡನೆ ಬಾಯ್‍ಬಿಟ್ಟು ಮಾತಾಡುವುದಿಲ್ಲ, ಆದರೆ
ಕಣ್ಣಲ್ಲೇ ತಡವುತ್ತಾಳೆ, ಹೃದಯದಿಂದ ಸೋಕುತ್ತಾಳೆ
ಒಂದೇ ಒಂದು ಸ್ಪರ್ಶದಿಂದ ಮನದುಂಬಿಸುತ್ತಾಳೆ
ಈಕೆ...
ಎಲ್ಲರನ್ನೂ ಪ್ರೀತಿಯಿಂದ ಕರೆಯುತ್ತಾಳೆ
ಒರಲುತ್ತಾಳೆ, ಮೆರೆಯುತ್ತಾಳೆ
ನನ್ನನ್ನು ಕರೆಯುವುದಿಲ್ಲ ಆದರೆ
ಕೈ ಹಿಡಿದು ನಡೆಸುತ್ತಾಳೆ, ನಡೆಯುತ್ತಾಳೆ
ಕಣ್ಣೀರ ತೊಡೆಯುತ್ತಾಳೆ
ಈಕೆ...
ಎಲ್ಲರಿಗೂ ಬೇಕಾದವಳು
ಎಲ್ಲರೊಡನೆ ಬೆರೆಯುವಳು, ಮೊರೆಯುವಳು
ನನ್ನನ್ನು ಪೊರೆಯುವಳು, ಹೂವಂತೆ ಅರಳುವಳು,
ಪುಟದಂತೆ ತೆರೆಯುವಳು, ಬಾಳ ಕವಿತೆಗಳ ಬರೆಯುವಳು
ಈಕೆ... ನನ್ನವಳು, ಎಂದೆಂದಿಗೂ ನನ್ನೊಂದಿಗೊಂದಾಗಿರುವವಳು
Saturday, December 02, 2006
Subscribe to:
Post Comments (Atom)
9 comments:
ತುಂಬಾ ಸುಂದರವಾಗಿವೆ ಸಾಲುಗಳು..
>ಕಣ್ಣಲ್ಲೇ ತಡವುತ್ತಾಳೆ, ಹೃದಯದಿಂದ ಸೋಕುತ್ತಾಳೆ
ಒಂದೇ ಒಂದು ಸ್ಪರ್ಶದಿಂದ ಮನದುಂಬಿಸುತ್ತಾಳೆ
ತುಂಬಾ ಇಷ್ಟವಾದವೂ ಈ ಸಾಲುಗಳು..
ಅಂದಾಗೆ 'ಈಕೆ' ಯಾರು?
ಧನ್ಯವಾದಗಳು ಶಿವಶಂಕರ್....
ನಿಮಗೆ ಈಕೆ ಯಾರಿರಬಹುದನ್ನಿಸುತ್ತಿದೆ [:)]
ಅನ್ನಪೂರ್ಣ ಅವರೆ,
ಈಕೆ ಯಾರೆಂಬ ಒಗಟು ನೀವೇ ಬಿಡಿಸಿ.
ಮಗುವಿನ ಬಗೆಗೆ ಅಂತ ನಾನು ತಿಳಿದುಕೊಳ್ಳುವೆ.
ಶಿವ್ ಅವರಿಗೆ 'ಈಕೆ' ಯಾರು ಅಂತ ಗೊತ್ತಿದ್ದೇ ಕೇಳ್ತಾ ಇದ್ದಾರೆ ;)
ಆಕೆ, ಆತ ಎಲ್ಲವೂ ನಾನೇ...
ಒಂದು ವೇಳೇ ಈ ಕವನವನ್ನು ನೀವು ಬರೆದಿದ್ದರೆ ಅದು ನೀವೆ....
ಇದು ಸತ್ಯ... ಅಸತ್ಯವಳಿಸುವಂಥಾ ಸತ್ಯ.... [;)]
ನನ್ನ ಬ್ಲಾಗಿನಲ್ಲಿ ನಿಮ್ಮ ಲಿಂಕು... :-)
nimm a kavana chenangide. inno bareiri
ಧನ್ಯವಾದಗಳು ಎನಿಗ್ಮಾ ಅವ್ರೇ....
ಪರವಾಗಿಲ್ಲ. ಸಾಲುಗಳಲ್ಲಿ ಬಂಧ, ನಿರಂತರತೆ ಇದೆ. ಗಂಭೀರ ಕವನಕ್ಕೆ ಯಾಕೆ ಪ್ರಯತ್ನಿಸಬಾರದು ನೀವು?
Dhanyavaadagalu Bhagavatharige...
Post a Comment