Saturday, April 07, 2007
ಸಂಗಾತಿ
ನಿದ್ದೆ ಬರುತ್ತಿದ್ದರೆ ಹೇಳುತ್ತಾನೆ
ನಿನ್ನ ಬೆಕ್ಕುಮರಿಗೆ ನಿದ್ದೆ ಬರುತ್ತಿದೆ
ಈತನೇನಾದರೂ ಬೆಕ್ಕಾಗಿದ್ದರೆ
ನಾನು ಕುಳಿತಾಗ ಸೀರೆಯ ನೆರಿಗೆಯಲ್ಲಿ ಮುದುರಿ
ಹೊಟ್ಟೆ ಗುರುಗುಡಿಸುತ್ತಾ ನಿದ್ರಿಸುತ್ತಿದ್ದ
ಸದಾ ನನ್ನ ಮನಸು ಹೃದಯಕ್ಕಂಟಿಕೊಂಡಿರುವ ಈತ
ಬೆಕ್ಕೇ ಹೌದು
ಕಾಯುತ್ತಿರುವಾಗ ಹೇಳುತ್ತಾನೆ
ನಿನ್ನ ನಾಯಿಮರಿ ಹಾದಿ ನೋಡುತ್ತಿದೆ
ಈತನೇನಾದರೂ ನಾಯಿಯಾಗಿದ್ದರೆ
ಮುಖ ಕಂಡೊಡನೆ ಬಾಲವಾಡಿಸುತ್ತಾ
ನಗೆ ಕಂಡೊಡನೆ ನೆಗೆದು ಹರ್ಷಿಸುತ್ತಿದ್ದ
ಸದಾ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಈತ
ನಾಯಿಯೇ ಹೌದು
ಹೊಗಳಿದರೆ ನಾಚಿ ಹೇಳುತ್ತಾನೆ
ನಿನ್ನ ಗುಬ್ಬಿಮರಿ ಉಬ್ಬಿ ಹೋಗುತ್ತಿದೆ
ಈತನೇನಾದರೂ ಗುಬ್ಬಿಯಾಗಿದ್ದರೆ
ಹೆಕ್ಕಿ ಆರಿಸಿ ಶ್ರೇಷ್ಠವಾದುದನ್ನು ನನಗೇ ಕೊಡುತ್ತಿದ್ದ
ಸದಾ ನನಗೆ ಒಳ್ಳೆಯದೇ ಸಿಗಬೇಕೆಂದು ಹಾರೈಸುವ ಈತ
ಗುಬ್ಬಿಯೇ ಹೌದು
ನಾನು ಬಸವಳಿದರೆ ಕೇಳುತ್ತಾನೆ, ಸುಸ್ತಾಯ್ತಾ ಮಗಳೇ
ಹಸಿವೆಂದರೆ ಕೇಳುತ್ತಾನೆ, ಹಸಿವೇನೋ ಪುಟ್ಟಾ
ಹಾಗಾದರೆ, ಈತ ನನ್ನ ತಂದೆಯೇ, ಇಲ್ಲಾ ತಾಯಿಯೇ?
ಅಲ್ಲವೆಂದಾದರೆ ಯಾರೀತ ! ನೀವೇ ಹೇಳಿ ಯಾರೀತ !!
Sangaathi
nidde baruttiddare hELuttaane
ninna bekkumarige nidde baruttide
ItanEnaadaroo bekkaagiddare
naanu kuLitaaga sIreya nerigeyalli muduri
hoTTe guruguDisuttaa nidrisuttidda
sadaa nanna manasu hRudayakkaMTikoMDiruva Ita
bekkE haudu
kaayuttiruvaaga hELuttaane
ninna naayimari haadi nODuttide
ItanEnaadaroo naayiyaagiddare
muKa kaMDoDane baalavaaDisuttaa
nage kaMDoDane negedu harShisuttidda
sadaa nannannu kaNNalli kaNNiTTu kaayuva Ita
naayiyE haudu
hogaLidare naaci hELuttaane
ninna gubbimari ubbi hOguttide
ItanEnaadaroo gubbiyaagiddare
hekki aarisi shrEShThavaadudannu nanagE koDuttidda
sadaa nanage oLLeyadE sigabEkeMdu haaraisuva Ita
gubbiyE haudu
naanu basavaLidare kELuttaane, sustaaytaa magaLE...
hasiveMdare kELuttaane, hasivEnO puTTA
haagaadare, Ita nanna taMdeyE, illaa taayiyE?
allaveMdaadare yaarIta ! nIvE hELi yaarIta !!
Subscribe to:
Post Comments (Atom)
18 comments:
yaaru? nanganthoo gotthaglillappa :-)
Sorry, kavithe chennaagide.
bahaLa dinagaL nantarada kavite!
chennagiddu! en madam ge matte kavite bariyo mood banda haangide!:)
Che ! naanE mele helidroo nimge gottagilva Sushrutha [;)]
sorry yaake ? ashtu dukha padO thara idya... [:D]
Shreenidhi - hee hee... baryo mood anthalla... sumne.. heege... [:)]
ಯಾರಾತ?? ಸೀಕ್ರೆಟ್ಟಾ?? ;-)
hee hee.. nan hatra sigaret ella illa antha gottilva Arun nimge :)
nimma sangatina ella prani pakshigalali noduva nimma drushti kona channagide......:)
bekkinna marihange muddagide nimma kavithe :)
@ thanks Deepak :)
@ enigma - hauda !! thanks :)
ನಿಮ್ಮ "ಸಂಗಾತಿ" ಕವಿತೆ ತುಂಬಾ ಇಷ್ಟವಾಯಿತು. ಅವನ್ಯಾರು ಅಂತ ನನಗೆ ಗೊತ್ತಾಯಿತು. ಅವನು ನಿಮ್ಮ ಸಂಬಂಧಿಕನೆ. ಏನೋ someಬಂಧ ಇರುವ ಅವನು ನಿಮ್ಮವನೆ.
Basava raju - thanks :)
avnu nanna sambandhikane antha adre, adu somebandha irlardu, sama-bandha agbeku alva :)
kanasu chennagide
enisuvudu
onedu dina..
ekathanathe
kanuvudu
innondu dina...
ತುಂಬಾ ಮನತಟ್ಟುವ ಕವನ. ಆ ವ್ಯಕ್ತಿಯಾರೆಂದು ನಿಮಗೂ ಇಲ್ಲಿ ಪ್ರೆಶ್ನಿಸಿದ ಎಲ್ಲರಿಗೂ ಬೇಗ ತಿಳಿಯುವಂತಾಗಲಿ ;-)
ಆತನು/ಳು ಅಂತರಾತ್ಮ ಅಲ್ಲವೆ?
ಅನ್ನಪೂರ್ಣ ಮೇಡಮ್,
ನಿಮ್ಮ ಕವನ ಚೆನ್ನಾಗಿದೆ. ನಾಯಿ ಬೆಕ್ಕು ಗುಬ್ಬಿ ಎಲ್ಲಾ ಓಕೆ ಯಾರಾತ ಎನ್ನುವ ಸಸ್ಪೆನ್ಸ್ ಯಾಕೆ ?
ಕವನ ಬಹಳ ಚೆನ್ನಾಗಿದೆ.. ಜಿಂಕೆ, ಹಂಸ ಹಕ್ಕಿಗಳಿ ಹೋಲಿಸಿ ಬರೆದ ಹಲವು ಕವನಗಳ ಓದಿದ್ದೆ.. ಆದರಿಲ್ಲಿ ಹೊಸತನವಿದೆ... ಮತ್ತು ಕವನಕ್ಕೆ ಪೂರಕವಾಗಿ ಅವುಗಳನ್ನು ಉಪಯೋಗಿಸಿದ್ದು ಚೆನ್ನಾಗಿದೆ...
ಎಲ್ಲರಿಗೂ ಧನ್ಯವಾದಗಳು.
ಕ್ಷಮಿಸಿ, ಬಹಳ ತಡವಾಗಿ ಉತ್ತರಿಸುತ್ತಿದ್ದೇನೆ....
ನಂಗೊತ್ತಿಲ್ಲಪ್ಪ ನೀವೇ ಹೇಳಬೇಕು. ಕವಿತೆ ಮಾತ್ರ ಬೊಂಬಾಟ್.
@ ಕೂಲ್ - ನಂಗೂ ಗೊತ್ತಿಲ್ಲ :D
ಧನ್ಯವಾದಗಳು..
Post a Comment