Friday, March 07, 2008

ಪದ್ಯಗಳು

ಪದ್ಯಗಳು ಹುಟ್ಟುವುದೇ ಹೀಗೋ, 
ಪದ್ಯಕ್ಕೆ ಪದಗಳು ದೊರೆಯುವುದು ಹೀಗೋ

ನಡುರಾತ್ರೆಯಾದರೂ ನಿದ್ದೆಬಾರದೆ, 
ತಾರಸಿಯ ತೊಲೆಗಳನ್ನೆಣಿಸುತ್ತಿದ್ದಾಗ,
ಮಟಮಟ ಮಧ್ಯಾಹ್ನ 
ಮಧ್ಯರಸ್ತೆಯಲ್ಲಿ ಮೈಮರೆತು ನಿಂತಾಗ !

ಮುಗ್ಧ ಮಗುವೊಂದು 
ಭಯಗೊಂಡು ಬೆವೆತಾಗ,
ದುರುಳರ ದೃಷ್ಟಿಗೆ ಬಿದ್ದ ಯುವತಿ 
ಅಸಹಾಯಳಾದಾಗ

ಪದ್ಯಗಳು ಹುಟ್ಟುವುದೇ ಹೀಗೋ, 
ಅಥವಾ ಪದ್ಯಕ್ಕೆ ಪದಗಳು ದೊರೆಯುವುದು ಹೀಗೋ

padyagaLu huTTuvudE hIgO, padyakke padagaLu doreyuvudu hIgO
naDu rAtreyAdarU nidde bArade, tArasiya tolegaLaneNisuttiddAga,
maTamaTa madhyAhna madhyarasteyalli maimaretu niMtAga.
mugdha maguvoMdu BayagoMDu bevetAga,
duruLara dRuShTige biddayuvati asahAyaLAdAga.
padya huTTuvudE hIgO, athavA padyakke padagaLu doreyuvudu hIgO

2 comments:

Prabhuraj Moogi said...

"ನಡುರಾತ್ರೆಯಾದರೂ ನಿದ್ದೆಬಾರದೆ, ತಾರಸಿಯ ತೊಲೆಗಳನ್ನೆಣಿಸುತ್ತಿದ್ದಾಗ" ಆ ಸಾಲು ಬಹಳ ಇಷ್ತವಾಯಿತು... ಕವನಗಳೇ ಹಾಗೆ ಹೊತ್ತಲ್ಲದ ಹೊತ್ತಿನಲ್ಲಿ ಬಂದು ಬೆಂಕಿ ಹೊತ್ತಿಸಿ ಹೋಗುತ್ತವೆ... ನಿಮ್ಮ ಕವನಗಳು ಚೆನ್ನಾಗಿವೆ

Annapoorna Daithota said...

ಧನ್ಯವಾದಗಳು ಪ್ರಭುರಾಜ್..