ಪುಟ್ಟ ತಂಗಿ, ಒಬ್ಬ ಪುಟ್ಟ ಅಣ್ಣ
ಮನೆಯಲ್ಲಿ ಮರದ ಕೆಲಸ (ಕಾರ್ಪೆಂಟರಿ) ನಡೆಯುತ್ತಿದೆ.
ಆಟವಾಡುತ್ತಾ, ಆಡುತ್ತಾ, ಕೈಗೆತ್ತಿಕೊಂಡ ‘ಮರಳು ಕಾಗದ’ (ಸಾಂಡ್ ಪೇಪರ್) ನೋಡಿ, ಏನನ್ನಿಸಿತೋ,
ಬಗ್ಗಿ ಏನನ್ನೋ ಹೆಕ್ಕುತ್ತಿದ್ದ ಪುಟ್ಟ ತಂಗಿಯ ಬೆತ್ತಲೆ ಬೆನ್ನಿನ ಮೇಲೆ ಒರೆದ.
ತಂಗಿಯ ಅಳು ತಾರಕಕ್ಕೇರಿದಾಗ ಬಂದ ಅಪ್ಪ, ವಿಷಯ ತಿಳಿದು, ರಕ್ತ ಬರುತ್ತಿರುವ ಬೆನ್ನನ್ನು ನೋಡಿ,
ತಾನು ತಂಗಿಗೆ ಮಾಡಿರುವುದೇನೆಂದು ತಿಳಿಯಲು ಹುಡುಗನ ಪುಟ್ಟ ಕೈಗೆ ಮೆತ್ತಗೆ ‘ಮರಳು ಕಾಗದ’ ಉಜ್ಜಿ,
ಆ ತಪ್ಪಿಗೆ ಹಾಗೂ ಮಗನ ನೋವಿಗೆ, ಮನದಲ್ಲಿ ದುಗುಡ ತುಂಬಿಕೊಂಡು ತನ್ನ ಕೈಗೂ ಗಸಗಸ ತಿಕ್ಕಿಕೊಂಡ.
ಇಷ್ಟರಲ್ಲೇ ಅಲ್ಲಿಗೆ ಬಂದ ಅಮ್ಮ ಎಲ್ಲವನ್ನೂ ನೋಡಿ, ಕಣ್ಣಲ್ಲಿ ನೀರು ತುಂಬಿಕೊಂಡು, ಜೇನು ತಂದು ಮೂವರಿಗೂ ಹಚ್ಚುತ್ತಾಳೆ.
ಈಗ ಮತ್ತೆ ಪುಟ್ಟ ಹುಡುಗಿಯ ಕಣ್ಣಲ್ಲಿ ನೀರು, ಬಾಯಲ್ಲಿ ವಾಲಗ.
ಕೈಗೆ ಹಚ್ಚಿದ ಜೇನನ್ನು ಅಣ್ಣ ನೆಕ್ಕುತ್ತಿದ್ದಾನೆ, ನನಗೆ ಬೆನ್ನಿಗೆ ಹಚ್ಚಿದೀರಲ್ಲಾ, ನಾನು ಹೇಗೆ ನೆಕ್ಕಲಿ ?! ವಾss..... !

12 comments:
ಅನ್ನಪೂರ್ಣ ಮೇಡಂ,
ಸಂಸಾರದ ಒಳ ಸಾರ ಮತ್ತು ಅದರ ನವಿರತೆಯ ದರ್ಶನವಾಯಿತು.
ಮಕ್ಕಳ ಮುಗ್ಧತೆ ಮನಸ್ಸಿಗೆ ಬಹಳ ಹತ್ತಿರವೆಂದೆನಿಸಿತು.
ಅನ್ನಪೂರ್ಣ ಅವರೆ...
ಅಂತೂ ಬರೆದಿರಲ್ಲ :-)
ಇಂಥದ್ದೇ ಹಲವು ಕಾರಣಗಳಿಗೆ ಮಕ್ಕಳು ನಂಗೆ ತುಂಬ ಇಷ್ಟ.
ಚಿಕ್ಕ ಚೊಕ್ಕ ಚೆಂದದ ಬರಹಕ್ಕೆ ಧನ್ಯವಾದ.
ರಾಜೇಶ್, ಧನ್ಯವಾದಗಳು
ಹೌದು, ಮಕ್ಕಳ ಮುಗ್ಧ ಮನಸ್ಸು ಎಲ್ಲವನ್ನೂ ಮರೆಸುವಂಥದ್ದು,
ಮಕ್ಕಳೇ ಹಾಗೇ ನೆನೆದರೆ ಮನದಲ್ಲಿ ಮಲ್ಲಿಗೆ ಹರಡುತ್ತಾರೆ.
ಶಾಂತಲಾ - ನಿಮ್ಮ ‘ಬೆದರಿಕೆಯ’ ಪರಿಣಾಮ ಅನ್ಸುತ್ತೆ ಅಲ್ವಾ :D
ನಂಗೂ ಅಷ್ಟೇ, ಇವೇ ಕಾರಣಕ್ಕೇ ಮಕ್ಕಳು ತುಂಬ ಇಷ್ಟ.
ಧನ್ಯವಾದಗಳು, ಅಭಿಪ್ರಾಯಕ್ಕೆ ಹಾಗೂ ಪ್ರೋತ್ಸಾಹಕ್ಕೆ :-)
ಅನ್ನಪೂರ್ಣ
ಚೆನ್ನಾಗಿದೆ, ಇನ್ನಷ್ಟು ಬರೆಯಿರಿ, ಬರೆಯುತ್ತಿರಿ. ನಿಮ್ಮ ಬ್ಲಾಗನ್ನು ಅನುಸರಿಸುತ್ತಿದ್ದೇನೆ. ನೀವು ನನ್ನ ಬ್ಲಾಗನ್ನು ಅನುಸರಿಸಿದರೆ ಸ೦ತೋಷ
ಮುಗ್ಧ ಮನಸ್ಸಿನ ಏನೂ ಅರಿಯದ ಮುದ್ದು ಮಕ್ಕಳ ಆಟಾಟೊಪಗಳನ್ನು ನೋಡಲು ಎಷ್ಟು ಚೆಂದ...ಆ ನಡುವೆ ಅಪ್ಪ-ಅಮ್ಮನ ಪ್ರೀತಿ...ಆಹಾ...
ಎಲ್ಲವನ್ನೂ ಚಿಕ್ಕದಾಗಿ-ಚೊಕ್ಕದಾಗಿ ತೆರೆದಿಟ್ಟಿದ್ದೀರಿ...
ಹೀಗೆ ಬರೀತಿರಿ...
ಅನ್ನಪೂರ್ಣರವರೆ...
ಬಹಳ ಬಾರಿ ಬಂದು ನಿಮ್ಮ ಹಳೆಯ ಲೇಖನ ಓದಿ ಹೋಗುತ್ತಿದ್ದೆ....
ದಯವಿಟ್ಟು ಬರೆಯಿರಿ..
ಚೆನ್ನಾಗಿರುತ್ತದೆ ನಿಮ್ಮ ಬರಹಗಳು....
ನೋವಾಗಿ ಅಳುವ ಮಕ್ಕಳು..
ಶಮನಕ್ಕೆಂದು ಹಚ್ಚಿದ ಜೇನಿಗಾಗಿಯೂ ಅಳುವ ಕಾರಣ....
ಮುದ ತರಿಸಿತು...
ಅಭಿನಂದನೆಗಳು....
Interesting picture!
its beautiful....
keep writing such things for us....
ಅನ್ನಪೂರ್ಣ ಮೇಡಮ್,
:).. ಲೇಖನದಲ್ಲಿ ಬರುವ, ಮಕ್ಕಳ ತುಂಟತನ, ಬೆನ್ನಿಗೆ ಹಚ್ಚಿದ ಜೇನು ತಿನ್ನೋಕೆ ಆಗಲ್ವಲ್ಲ ಅನ್ನೋ ಪುಟ್ಟ ಹುಡುಗಿಯ ನೋವಿನ ಅಳು, ತುಂಬಾ ಚೆನ್ನಾಗಿವೆ.
ಅನ್ನಪೂರ್ಣ ಅವರೇ,
ಮಕ್ಕಳ ಅಳು-ನಗು ಚಿತ್ರಣವನ್ನು ಚಿಕ್ಕದಾಗಿ ಚೊಕ್ಕವಾಗಿ ಬಿಡಿಸಿದ್ದೀರಿ. ಈ ಸಂದರ್ಭವನ್ನು ಸೃಷ್ಟಿಸಿ ಮನಸ್ಸಿಗೆ ಖುಷಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಮೀನಾ ಜೋಇಸ್
good one :) keep writing :)
ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು, ನಿಮ್ಮ ಆತ್ಮೀಯ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಲು ತಡವಾದುದಕ್ಕೆ ಕ್ಷಮೆ ಇರಲಿ..
Post a Comment