ಮಕ್ಕಳು - ಮಲ್ಲಿಗೆ
ಮಕ್ಕಳೇ ಹಾಗೆ, ನೆನೆದರೆ ಮನದಲ್ಲಿ ಮಲ್ಲಿಗೆ ಹರಡುತ್ತಾರೆ
ಪರಿಮಳವು ನಮ್ಮೊಳಗೆ ಪಸರಿಸುವಂತೆ ಮಾಡುತ್ತಾರೆ
ತಮ್ಮ ಅರಿವಿಗೂ ಮೀರಿ ಮಧುರವಾಗಿರುತ್ತಾರೆ
ಊಹೆಗೂ ಮೀರಿದ ಅರಿವುಳ್ಳವರಾಗಿರುತ್ತಾರೆ
ಬಾಯಾರಿದವರಿಗೆ ಪ್ರೀತಿ ಹಂಚುವ ಝರಿಯಾಗಿರುತ್ತಾರೆ
ದಣಿದವರಿಗೆ ದಯೆ ತೋರುವ ದೈವವಾಗಿರುತ್ತಾರೆ
ಮಣಿದವರಿಗೆ ಮಮತೆ ನೀಡುವ ಕೊಡವಾಗಿರುತ್ತಾರೆ
ಕಲಿತಿರದ ಪಾಠಗಳ ಕಲಿಸುವ ಗುರುವಾಗಿರುತ್ತಾರೆ
ಆಟಪಾಟಗಳ ವಿಸ್ಮಯದಲ್ಲಿ ಮುಳುಗೇಳುತ್ತಿರುತ್ತಾರೆ,
ಮಾತು, ಮೌನಗಳ ಬಂಗಾರವಾಗಿರುತ್ತಾರೆ
ಮುಗ್ಧತೆಯಿಂದಲೇ ಕಲ್ಮಶ ತೊಳೆವ ಕೊಳವಾಗಿರುತ್ತಾರೆ
ಭಯವಿಲ್ಲದೇ ವ್ಯವಹರಿಸುವ ದನಿಯಾಗಿರುತ್ತಾರೆ
ಕೆಲವೊಮ್ಮೆ ಜವಾಬ್ದಾರಿಗೆ ಹೆಗಲಾಗುತ್ತಾರೆ
ಕತ್ತಲಲ್ಲಿ ನರಳುವವರಿಗೆ ಹಗಲಾಗುತ್ತಾರೆ
ಬಗಲಲ್ಲೇ ಇದ್ದು ಸಮಾಧಾನ ಹೇಳುತ್ತಾರೆ
ತಮ್ಮ ಮೇಲೆ ದೌರ್ಜನ್ಯ ನಡೆದರೂ ಮರೆತು ಬಿಡುತ್ತಾರೆ
ಮಕ್ಕಳೇ ಹಾಗೆ, ನೆನೆದರೆ ಮನದಲ್ಲಿ ಮಲ್ಲಿಗೆ ಹರಡುತ್ತಾರೆ
ಪರಿಮಳವು ನಮ್ಮೊಳಗೆ ಪಸರಿಸುವಂತೆ ಮಾಡುತ್ತಾರೆ
3 comments:
ಹೌದು, ದಣಿದವರಿಗೆ ದಯೆ ತೋರುವ ದೈವವಾಗಿರುತ್ತಾರೆ
ಹೌದು ನೆನೆದರೆ ಮನದಲ್ಲಿ ಮಲ್ಲಿಗೆ ಹರಡುತ್ತಾರೆ.ಮನೆ-ಮನವನ್ನು ಬೆಳಗಿಸುತ್ತಾರೆ.ಮನೆಯಲ್ಲಿ ಮಕ್ಕಳಿದ್ದರೆ ಚೆನ್ನ.
ಹೌದು ನೆನೆದರೆ ಮನದಲ್ಲಿ ಮಲ್ಲಿಗೆ ಹರಡುತ್ತಾರೆ.ಮನೆ-ಮನವನ್ನು ಬೆಳಗಿಸುತ್ತಾರೆ.ಮನೆಯಲ್ಲಿ ಮಕ್ಕಳು ಇದ್ರೇನೆ ಚೆನ್ನ.
Post a Comment