ಭಾವನೆ ಮಾತಿಲ್ಲದೇ ಮಧುರವಾಗಿ ಮನ ತಟ್ಟುವುದು,
ಚೌಕಟ್ಟಿನೊಳಗಿನ ಚಿತ್ರಗಳು ಚಲಿಸಿ ಹೊರ ಬರಲು ತುಡಿಯುವುದು,
ಸುರಿವ ಜಡಿಮಳೆಯೂ ಸಹನೀಯವಾಗಿ ಸುಂದರವೆನಿಸುವುದು.
ಸಮಯ ಸಹಭಾಗಿಯಾಗಿ ಸರಿತಪ್ಪೆಂಬ ಜಿಜ್ಞಾಸೆ ಮೂಲೆ ಸೇರುವುದು,
ಯಾರ ಹಂಗೂ ಇರದ ಮನಸು ಮೈ ಬಿರಿದು ಅರಳುವುದು,
ಕ್ಷಣದಲ್ಲಿ ಹೊಸತನ ತುಂಬಿ ಬೆಸುಗೆಯ ಹಾದಿ ನೋಡುವುದು,
ನೆಮ್ಮದಿಯ ನಿದ್ರೆಯಲಿ ನವಿರಾದ ಸ್ವಪ್ನಗಳ ಬೇಡುವುದು.
ಮನದ ಮೂಲೆಯ ನಾಚಿಕೆ ತೊಡೆದು ಕುಣಿಯುವುದು,
ಇಹದ ಪರಿವಿರದೆ ಭಯದ ಅರಿವಿರದೆ ವಿಹರಿಸುವುದು,
ಸನಿಹದಲಿ ಸಮನಾಗಿ ಸರಿದಂತೆ ಭ್ರಮಿಸುವುದು,
ಭ್ರಮೆಯನ್ನೆ ನಿಜವೆಂದು ಸಂಭ್ರಮಿಸಿ ಸುಖಿಸುವುದು.
Image: Google.co.in |