Wednesday, October 18, 2023

ಬದುಕು ಸುಂದರವಾಗಿದೆ - II


ಕನಸಲ್ಲಿ ಕನವರಿಸಿ ಮನದಲದನಳವಡಿಸಿ

ಭ್ರಮೆಯಲ್ಲಿ ಬದುಕಿದರೆ ಬದುಕೇನು?

ಕಂಡ ಕನಸ ನನಸಾಗಿಸಲು ಮುನ್ನಡೆಯದೇ

ನಿಂದಲ್ಲೇ ನಿಂದರೆ ಪ್ರಯೋಜನವೇನು?


ಕಷ್ಟಗಳ ಕಟುವಾಗಿ ಬೈದೆದುರಿಸಬೇಕು

ಕಲ್ಲು ಮುಳ್ಳುಗಳ ಸರಿಸಿ ಬದಿಗೊತ್ತಬೇಕು

ಸಾಧನೆಯ ಹಾದಿಯಲಿ ಹೋರಾಡಬೇಕು

ಧೃತಿಗೆಡದೆ ಕೃತಿಗಿಳಿದು ತಲೆಯೆತ್ತಬೇಕು

No comments: