Tuesday, September 15, 2026

ಅಚಿಂತ್ಯ 2026

 

ಚಿಂತನೆಗೆ ನಿಲುಕದ ಚಿನ್ನಾರಿ ಪುಟ್ಟಗಿಂದು 

ಮೂರು ವರುಷಗಳಂತೆ 

ಕಳೆದವು ದಿನಗಳು ಪುಟುಪುಟು ನಡೆಯುತ್ತಾ 

ಮೂರು ನಿಮಿಷಗಳಂತೆ 


ಆಟಪಾಠಗಳೊಂದಿಗೆ ಬಹುಮಾನಗಳನ್ನು 

ಪಡೆಯುತ್ತಾನೆ 

ಪುಟ್ಟು ಕೈಗಳಿಂದ ಪುಸ್ತಕದಲ್ಲಿ ಚಿತ್ರಗಳ 

ಬಿಡಿಸುತ್ತಾನೆ 


ತೊದಲು ನುಡಿಯಲಿ ಟೀಚರ ಮಾತುಗಳ 

ಅನುಕರಿಸುತ್ತಾನೆ 

ಮನೆ ತುಂಬ  ಹೆಜ್ಜೆಯಿಟ್ಟು ಓಡಾಡುತ್ತಾ 

ಚಿತ್ತಾರ ಮೂಡಿಸುತ್ತಾನೆ 


ಮಣ್ಣಲ್ಲಿ ಮನೆ ಕಟ್ಟಿ ಮರಳಲ್ಲಿ ಬೆರಳಿಟ್ಟು 

ಕಣ್ಣು ಮಿಟುಕಿಸಿ ನಗುತ್ತಾನೆ 

ರಾಜನಂತೆ ರೈಲಲ್ಲಿ ಕುಳಿತು ಟಾಟಾ ಮಾಡುತ್ತ

ಖುಷಿಯಾಗಿ ಕುಣಿಯುತ್ತಾನೆ 


ಶುಭವಾಗಲಿ ಕಂದ ನಿನಗೆ 

ಇಂದು ಮತ್ತು ಎಂದೆಂದೂ

ದೇವರಾಶೀರ್ವಾದವಿರಲಿ ನಿನ್ನ ಮೇಲೆ 

ಇಂದೂ, ಮುಂದೂ.

No comments: