Sunday, March 30, 2008
ಬದುಕು ಸುಂದರವಾಗಿದೆ - I
೦೧.
ಮಳೆ ಬಂದು ರಸ್ತೆಯ ಒಂದು ಬದಿಯಲ್ಲಿ ನೀರು ನಿಂತಿದೆ.
ಇನ್ನೊಂದೆಡೆ ವಾಹನಗಳು ಭರದಿಂದ ಓಡಾಡುತ್ತಿವೆ.
ಮಧ್ಯವಯಸ್ಕ ಸೈಕಲ್ ಸವಾರನೊಬ್ಬ, ನಿಂತಿರುವ ನೀರಿನ ಮೇಲೆ ತಿರುತಿರುಗಿ ಸೈಕಲ್ ಓಡಿಸುತ್ತಾ, ನೀರು ಚಿಮ್ಮಿಸುತ್ತಾ ಸಂತೋಷ ಪಡುತ್ತಿದ್ದಾನೆ.
೦೨.
ನೂಕುನುಗ್ಗಲಿನ ನಡುವೆ, ಪುಟ್ಟ ಮಗುವನ್ನು ಸೊಂಟದ ಮೇಲೇರಿಸಿಕೊಂಡಿರುವ ಮಹಿಳೆ, ಪ್ರಯಾಸದಿಂದ ಬಸ್ ಹತ್ತಿ, ಯಾರೋ ಬಿಟ್ಟು ಕೊಟ್ಟ ಸ್ಥಳದಲ್ಲಿ ಕುಳಿತಳು. ಮಗುವಂತೂ ಕಳವಳ, ಆತಂಕದಿಂದ, ಬೆದರಿ, ಚಿಗರೆಯಾಗಿತ್ತು. ಬಸ್ ಹೊರಟಾಗ ಗಾಬರಿ, ಅಸಹಾಯದಿಂದ ಚೀರಿತು "ಅಪ್ಪಾ........!!"
ಕಂದನ ಕರೆ ಕೇಳಿಸಿಕೊಂಡ ಅಪ್ಪ, ಜನರ ಮಧ್ಯೆ ಜಾಗ ಮಾಡಿಕೊಂಡು ಮುಂದೆ ಬಂದು ಮಗುವಿಗೆ ತನ್ನ ಮುಖ ತೋರಿಸಿದ.
ಅಪ್ಪನ ಮುಖ ಕಂಡ ಕೂಡಲೇ ನೆಮ್ಮದಿ, ಸಂತೋಷದಿಂದ ಮಗು ಮತ್ತೆ ಚೀರಿತು, "ಅ.........ಪ್ಪಾ !!
Subscribe to:
Post Comments (Atom)
12 comments:
ಖಜಾನೆಯ ಎರಡನೇ ಬಿಂಬ ತುಂಬ ಚೆಂದ....
Dhanyavadagalu Venu :-)
ಅನ್ನಪೂರ್ಣ ದೈತೋಟರವರೆ,
ನೀವು ನನ್ನ ಬ್ಲಾಗಿಗೆ ಬಂದದ್ದು ಖುಷಿಯಾಯಿತು. ಹಾಗೆ ನಿಮ್ಮ ಬ್ಲಾಗಿಗೆ ಬಂದೆ. ನಿಮ್ಮ ಲೇಖನ ಓದಿದೆ. ಚಿಕ್ಕದಾಗಿ ಚೊಕ್ಕವಾಗಿದೆ. ಮಗುವಿನ ಎರಡು ಭಾವನೆಗಳ ಸನ್ನಿವೇಶ ಚೆನ್ನಾಗಿದೆ. ಮುಂದುವರಿಸಿ.
ಆಹಾಂ! ನನ್ನ ಕ್ಯಾಮೆರಾ ಹಿಂದೆ ಬ್ಲಾಗಿಗೆ ಹೊಸ ಲೇಖನವನ್ನು ಹಾಕಿದ್ದೇನೆ. ಅದು ಒಬ್ಬ ಮುದುಕನ ಕತೆ. ಬಿಡುವು ಮಾಡಿಕೊಂಡು ಬನ್ನಿ.
Dhanyavadagalu Shivu,
mudukana kathe odi aagide :-)
ಅನ್ನಪೂರ್ಣ ದೈತೋಟ ರವರೆ,
ನೀವು ಮತ್ತೆ ನನ್ನ ಬ್ಲಾಗಿನ ನಾಯಿ...ಪ್ರಸಂಗವನ್ನು ನೋಡಿದ್ದೀರಿ...ನನಗೆ ಖುಷಿಯಾಯಿತು...
ನನ್ನ ಛಾಯಾ ಕನ್ನಡಿಯಲ್ಲಿ ಮತ್ತಷ್ಟು ಟೋಪಿಗಳಿವೆ...ಬನ್ನಿ ನೋಡಿ.....ಅನಂದಿಸಿ......
ಶಿವು....
ಸುಂದರ ವರ್ಣನೆ.. ಚಿಕ್ಕದಾಗಿ ಬರೆದಿದ್ದರೂ ಅದೆಷ್ಟು ಭಾವನೆಗಳನ್ನು ಹೊರಹೊಮ್ಮಿಸಿದ್ದೀರಿ.. ಬರೆಯುತ್ತಾ ಇರಿ
ನಮಸ್ತೆ.. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ...
ವಂದೇ,
- ಶಮ, ನಂದಿಬೆಟ್ಟ
ಚೆನ್ನಾಗಿವೆ..
ಬದುಕು ನಿಜಕ್ಕೂ ಸುಂದರ. ಎರಡನೆಯದು ಮನಸ್ಸಿಗೆ ಹತ್ತಿರವಾದ ಬರಹ...
ella Kavanagalu tumba chennagide... simply superb :)
ನಿಮ್ಮ ಜೋಳಿಗೆಯಲ್ಲಿರುವ ಬರಹಗಳನ್ನು ಖಜಾನೆಗೆ ಹಾಕಿ ಮೇಡಂ...ನಾವೂ ಒದ್ತೇವೆ...
ಮನಸ್ವಿ, ರ್ಆಘವೇಂದ್ರ, ರಾಘವ ಶರ್ಮ ಹಾಗೂ ಸಂತೋಷ್ ಚಿದಂಬರ್
ನಿಮ್ಮೆಲ್ಲರ ಅಭಿಪ್ರಾಯ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು.
@ ರಾಘವ ಶರ್ಮ - ಸಧ್ಯಕ್ಕೆ ಜೋಳಿಗೆ ತೂತಾಗಿದೆ, ಹಾಗಾಗಿ ತುಂಬಿಸಿದ್ದೆಲ್ಲ ಮಾಯವಾಗುತ್ತಿದೆ, ಖಜಾನೆಗೆ ತಲುಪುತ್ತಿಲ್ಲ :D
Post a Comment