ಒಂದು ಹಾವಿನ ಸ್ನೇಹ ಮಾಡಿದೆ,
ಸಮಯವಲ್ಲದ ಸಮಯದಲ್ಲಿ ನನಗದು ಕಚ್ಚಿತು
ಈಗ ಮತ್ತೆ ಮನೆಯ ಸುತ್ತಮುತ್ತ ಹರಿದಾಡುತ್ತಿದೆ.
ಒಂದು ಬೆಕ್ಕಿನ ಸ್ನೇಹ ಮಾಡಿದೆ,
ಬೇಸರ ಬಂದಾಗ ಎದ್ದು ಹೋಯಿತು
ಈಗ ಮತ್ತೆ ಮನೆಯ ಕಿಟಕಿಯಲ್ಲಿ ಕುಳಿತು ಮಿಯಾವ್ ಅನ್ನುತ್ತಿದೆ.
ಒಂದು ಹಸುವಿನ ಸ್ನೇಹ ಮಾಡಿದೆ
ಒಮ್ಮೆ ಪ್ರೀತಿಯಿಂದ ತಡವಿದಾಗ ತಿವಿಯಿತು
ಈಗ ಮತ್ತೆ ಮನೆ ಮುಂದೆ ಬಂದು ಅಂಬಾ ಎನ್ನುತ್ತಿದೆ
ಒಂದು ಗೋಸುಂಬೆಯ ಸ್ನೇಹ ಮಾಡಿದೆ
ಒಂದು ದಿನ, ಮಾತಾಡುತ್ತಿದ್ದಂತೆ ಬಣ್ಣ ಬದಲಿಸಿತು
ಈಗ ಮತ್ತೆ ಮನೆಯೆದುರಿನ ಮರದಲ್ಲಿ ಅದೇ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದೆ
ನಾನೂ ಮತ್ತೆ ಮಾತಾಡುತ್ತಿದ್ದೇನೆ, ಪ್ರೀತಿ ತೋರುತ್ತಿದ್ದೇನೆ
ಸ್ನೇಹ ಹಸ್ತ ತೆರೆದೇ ಇದ್ದೇನೆ, ಬದುಕುದ್ದಕ್ಕೂ ಹೀಗೇ ಇರುತ್ತೇನೆ,
ಯಾಕೆಂದರೆ ದ್ವೇಷ ನಿಮಿಷ, ಪ್ರೀತಿ ಹರುಷ, ಸ್ನೇಹ ವರುಷ
Thursday, July 30, 2009
Subscribe to:
Post Comments (Atom)
13 comments:
True friendship consists not in the multitude of friends, but in their worth and value.
ಸಾಲುಗಳು ಚೆನ್ನಾಗಿವೆ. ಮತ್ತಷ್ಟು ಬರೆಯಿರಿ...
ವಾಹ್...
ಎಷ್ಟು ಸುಂದರ ಕವನ...!
ಸತ್ಯ ಕೂಡ...
ಗೋಸುಂಬೆ ಸಂಖ್ಯೆ ಕಡಿಮೆ ಇದ್ದರೂ..
ನಮಗೆ ಅದರ ಅನುಭವ ಮಾತ್ರ ಮರೆಯುವದೇ ಇಲ್ಲ...
ಪ್ರೀತಿ ವತ್ಸಲ್ಯದಿಂದ ಇರುವವರು ಜಾಸ್ತಿ ಇದ್ದರೂ..
ಅದು ಬೇಕೆಂದು ಮನಸ್ಸು ಬಯಸ್ಸುತ್ತಿದ್ದರೂ...
ಗೋಸುಂಬೆಯ ಅನುಭವ ಧುತ್ತೆಂದು ಎದುರಿಗೆ ಬಂದು ಬಿಡುತ್ತದೆ...
ಕವನದ ಭಾವಾರ್ಥ ತುಂಬಾ ಚೆನ್ನಾಗಿದೆ..
ನಾವೆಲ್ಲ ಹಾಗೆಯೇ ಇರಬೇಕು ಕೂಡ...
ಅಭಿನಂದನೆಗಳು... ಸುಂದರ ಕವನಕ್ಕೆ..
@ ಏಕಾಂತ : What you said is right, There is no need to have many number of friends but should have a healthy friendship.
ಪ್ರೋತ್ಸಾಹಕ್ಕೆ ಧನ್ಯವಾದಗಳು
@ ಪ್ರಕಾಶ್ / ಪ್ರಕಾಶಣ್ಣ :-)
‘ವಾಹ್ ’ ಗೆ, ಪ್ರೋತ್ಸಾಹಕ್ಕೆ ಧನ್ಯವಾದಗಳು :-)
ಸಿಹಿ ಜೊತೆ ಖಾರ, ಹುಳಿ, ಸಪ್ಪೆ, ಕೂಡ ಬೇಕಲ್ವಾ, ಇಲ್ಲಾಂದ್ರೆ ಬೇಗ ಮಧುಮೇಹ ಬಂದ್ಬಿಡುತ್ತೆ :D
ಹಾಗೇ ಗೋಸುಂಬೆಯ ಬಣ್ಣಗಳು, ಏನಂತೀರಾ ?
ಖಜಾನೆ ಬಹಳೇ ದೊಡ್ಡದಿದೆ ಮತ್ತು ಸುಂದರವಾಗಿದೆ ಮೇಡಮ್.. ಕವನ ನೈಜ ವಾಸ್ತವವನ್ನು ತಿಳಿಹೇಳಿದೆ... ಹಿಂದಿನ ಲೇಖನ ಸ್ಯಾಂಡ್ ಪೇಪರಿನಲ್ಲಿ ಉಜ್ಜಿದ ಬಗ್ಗೆ ಬಹಳೆ ಇಷ್ಟವಾಯಿತು, ಎಷ್ಟೊಂದು ವಿವಿಧ ಭಾವಗಳು ಒಂದೇ ಲೇಖನದಲ್ಲಿ ಕಾಣಿಸಿತು...
ಅನ್ನಪೂರ್ಣ ಅವರೇ,
ತುಂಬಾ ಚೆನ್ನಾಗಿದೆ ಪದ್ಯ.. ತುಂಬಾ ಅರ್ಥಪೂರ್ಣವಾಗಿದೆ. ಯಾರು ಏನೇ ಕೆಟ್ಟದು ಮಾಡಿದರೂ ಮತ್ತೆ ಅವರಿಗೇ ಸ್ನೇಹಹಸ್ತ ಚಾಚುವ ನಿಮ್ಮ ಔದಾರ್ಯ ಇಷ್ಟವಾಯಿತು. ಇನ್ನಷ್ಟು ಬರೆಯಿರಿ.
ಅಭಿನಂದನೆಗಳೊಂದಿಗೆ,
- ಉಮೇಶ್
ಅಭಿಪ್ರಾಯಕ್ಕೆ ಧನ್ಯವಾದಗಳು ಪ್ರಭುರಾಜ್ :)
ಉಮೇಶ್, ಅಭಿಪ್ರಾಯಕ್ಕೆ ಧನ್ಯವಾದಗಳು.
ಯಾರು ಏನೇ ಕೆಟ್ಟದು ಮಾಡಿದರೂ ಮತ್ತೆ ಅವರಿಗೇ ಸ್ನೇಹಹಸ್ತ ಚಾಚುವುದು ಔದಾರ್ಯವೂ ಆಗುತ್ತೆ, ಚಾಳಿ ಅಥವಾ ದೌರ್ಬಲ್ಯವೂ ಆಗುತ್ತೆ. ಹಾಗೆಯೇ, ‘ಕ್ಷಮಿಸಿ ದೊಡ್ಡವರೆನ್ನಿಸಿಕೊಳ್ಳಲು ಮಾಡುತ್ತಿರುವುದೆಂದೂ’ ಆಗುತ್ತೆ :)
waaaw, Adbhutha Ana avare...!
sneha kavana tumba channagide...!
Naanu Ondu Iliya sneha maadide, adu naanillada hottinalli bandu nanna Bread, Jam ella tindu haakibittitu...! :(
:P
:):(
ಅನ್ನಪೂರ್ಣ ರವರಿಗೆ ಅಭಿನಂದನೆಗಳು..ತೀರಾ ಸರಳ ಪದಗಳನ್ನು ಅತಿಗಾಢ ಭಾವನೆಯ ಸೂಚಕದಂತೆ ಬಳಸಿದ್ದೀರಿ...ಹಾವಿನ ಸ್ನೇಹ ಮತ್ತಿತರ ಪ್ರಾಣಿಗಳಿಗೆ ಹೋಲಿಸಿ..ಹೇಗೆ ನಮ್ಮ ದಿನಚರಿ ಸುತ್ತುತ್ತೆ ವ್ಯಕ್ತಿ ವಿಶೇಷಗಲ ಮಧ್ಯೆ ಎಂದು ತಿಳಿಸಿದ್ದಿರಿ..
ಬಹಳ ಸುಂದರ ಕವನ,
ಅದರಲ್ಲೂ ಮೊದಲ ಪ್ಯಾರ ಅರ್ಥ ಗರ್ಭಿತವಾಗಿದೆ
ಅಭಿನಂದನೆಗಳು ಸುಂದರ ಕವನಕ್ಕೆ
tumba chennagide istavayitu
ಅನ್ನಪೂರ್ಣ ಅವರೇ,
ನಿಮ್ಮ ಪೋಸ್ಟ್ ಓದಿದ ಮೇಲೆ ಕಾಮೆಂಟ್ ಹಾಕದೆ ಹೋಗಲಿಕ್ಕೆ ಮನಸ್ಸು ಬರಲಿಲ್ಲ.... ಒಟ್ಟಿನಲ್ಲಿ ಕಷ್ಟ ಕೊಡುವರು ಜಗಳ ಜಾಸ್ತಿ ಮಾಡುವವರು ನಮಗೆ ಮನಸ್ಸಿಗೆ ಬೇಗ ಹತ್ತಿರ ಆಗ್ತಾರೆ ಅಲ್ವ.. ಸಿಟ್ಟು ಮಾಡಿದ್ದರೆ ಎಷ್ಟು ಅಂತ ಮಾಡ್ತಿವಿ... ಸಿಟ್ಟಿಗೆ ಬೇಜಾರ್ ಆಗಿ ಆಗಾಗ ಸ್ಮೈಲ್ ಕೊಡುತ್ತೆ... :)
ತುಂಬಾ ಚೆನ್ನಾಗಿದೆ... ಕಲ್ಪನೆ ತುಂಬಾ ಚೆನ್ನಾಗಿದೆ... ಸಾಕು ಪ್ರಾಣಿಗಳನ್ನ ಕವನದಲ್ಲಿ ತಂದ ಸ್ಟೈಲ್ ಇದೆಯೆಲ್ಲ ಸೂಪರ್...!
ನಿಮ್ಮವ,
ರಾಘು.
ಯುವಪ್ರೇಮಿ, ಗೌತಮ್, ಜಲನಯನ, ಸಾಗರದಾಚೆಯ ಇಂಚರ, ಮನಸು, ರಘು
ಎಲ್ಲರಿಗೂ ಧನ್ಯವಾದಗಳು, ಇದನ್ನು ತಡವಾಗಿ ಹೇಳುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ.
Post a Comment