Thursday, February 08, 2007

ದೇವಕಾರ



ಹನಿಹನಿಯಾಗಿ ಹನಿಯುತ್ತಿತ್ತು ದೇವಕಾರ
ಪ್ರಕೃತಿಯೇ ಬರೆದಿದೆ ಇಲ್ಲಿ ಸುಂದರ ಚಿತ್ತಾರ

ಬಳುಕುತ್ತ ಬಳ್ಳಿಯಾಗಿ,
ಸುತ್ತುತ್ತ ಸುಳಿಯಾಗಿ ಹರಿಯುತ್ತಿತ್ತು
ಬಂಡೆಗಳ ಕೆಣಕುತ್ತ,
ಜೊತೆಗೂಡಿ ಸೆಣೆಸುತ್ತ ಮೊರೆಯುತ್ತಿತ್ತು

ಗುಪ್ತಗಾಮಿನಿಯಾಗಿ, ಸಪ್ತಕಾಮಿನಿಯಂತೆ
ಸುಪ್ತಕಾಮನೆಗಳ ಕೆರಳಿಸಿ ನಗುತ್ತಿತ್ತು
ಸಸ್ಯಶಾಮಲೆಯರೊಡನೆ ನಲಿಯುತ್ತಿತ್ತು

ನಿಂತೆಡೆ ನೀಲಿಯಾಗಿ, ಹರಿದೆಡೆ ಹೊಳೆಯುತ್ತ
ಪಾಚಿಯೊಡನೆ ಹಸಿರಾಗಿ ಜಾರುತ್ತಿತ್ತು
ರುದ್ರರಮಣಿಯಂತೆ ರೌದ್ರವಿತ್ತು
ಛಲದಲ್ಲಿ ಚಂಡಿಯಾಗಿ ಚಡಪಡಿಸುತ್ತಿತ್ತು

ಒಮ್ಮೊಮ್ಮೆ ಮಗುವಿನಂತೆ ಮುಗ್ಧವಾಗುತ್ತಿತ್ತು
ಮತ್ತೊಮ್ಮೆ ತಾಯಿಯಂತೆ ಮಮತೆ ತೋರುತ್ತಿತ್ತು
ಕೆಲವೊಮ್ಮೆ ಸ್ನೇಹ ಸೌರಭ ಸೂಸುತ್ತಿತ್ತು
ಇನ್ನೊಮ್ಮೆ ಪ್ರಿಯತಮನ ಅಪ್ಪುಗೆಯಂತೆ ಬೆಚ್ಚಗಿತ್ತು.

(ದೇವಕಾರ ಜಲಪಾತ ನೋಡಿದಾಗ ಮನಸಿಗೆ ಅನಿಸಿದುದನ್ನು ಗೀಚಿದೆ.)

Devakaara

hanihaniyaagi haniyuttittu dEvakaara
prakRutiyE baredide illi suMdara cittaara

baLukutta baLLiyaagi,
suttutta suLiyaagi hariyuttittu
baMDegaLa keNakutta,
jotegooDi seNesutta moreyuttittu

guptagaaminiyaagi, saptakaaminiyaMte
suptakaamanegaLa keraLisi naguttittu
sasyashaamaleyoroDane naliyuttittu

niMteDe nIliyaagi, harideDe hoLeyutta
paaciyoDane hasiraagi jaaruttittu
rudraramaNiyaMte raudravittu
Caladalli caMDiyaagi caDapaDisuttittu

ommomme maguvinaMte mugdhavaaguttittu
mattomme taayiyaMte mamate tOruttittu
kelavomme snEha saurabha soosuttittu
innomme priyatamana appugeyaMte beccagittu.......

(dEvakaara jalapaata nODidaaga manasige anisududannu gIcide...)

9 comments:

ಶ್ರೀನಿಧಿ.ಡಿ.ಎಸ್ said...

ಅಕ್ಕಾ,
ನನಗೂ ಇಂತಹುದೇ ಶಬ್ದಗಳು ಮೊಳೆತಿತ್ತು! ನೀ ಅದ್ನ ಚೊಲೋ ಮಾಡಿ ಬರದ್ದೆ ನೋಡು..

Parisarapremi said...

namma devakara-ne devakaara... aahhh... sakkath sakkath....

Annapoorna Daithota said...

ಧನ್ಯಳು - ಚೀ.... ಅ.... :-)

Annapoorna Daithota said...

Dhanyavaadagalu Sir... :)

Mahantesh said...

tummba olle kavan ....
kone pyara aMtu tumba sogasaagide...

ರಾಜೇಶ್ ನಾಯ್ಕ said...

ಅನ್ನಪೂರ್ಣ,

ನನಗೆ ಜಲಪಾತಗಳ ಭಾರೀ ಹುಚ್ಚು ಇದೆ. ಅದರಲ್ಲೂ ದೇವಕಾರ ಜಲಪಾತವಂತೂ ನನ್ನ ಫೇವರಿಟ್ ಗಳಲ್ಲೊಂದು. ಇದುವರೆಗೆ ಸುಮಾರು ಆರೇಳು ಬಾರಿ ನಿಮ್ಮ ಈ ಕವನ ಓದಿದ್ದೇನೆ. ಪ್ರತೀ ಬಾರಿಯೂ ನನ್ನನ್ನು ದೇವಕಾರ ಜಲಪಾತದ ಬಳಿ ಕರೆದೊಯ್ದಿದೆ ಈ ಕವನ. ಕೆಲವೇ ಸಾಲುಗಳಲ್ಲಿ ಸಂಪೂರ್ಣ ವಿವರಣೆ ನೀಡಿದ್ದೀರಿ. ನೀವು ಇನ್ನೂ ಹೆಚ್ಚು ಜಲಪಾತಗಳನ್ನು ನೋಡಿ ಇನ್ನಷ್ಟು ಇಂತಹ ಕವನಗಳನ್ನು ಬರೆಯುವಂತಾಗಲಿ.

Annapoorna Daithota said...

Dhanyavadagalu Mahantesh....
Kshamisi bahala divasagalaada mele dhanyavada heluttiddene....

Rajesh - nimma jalapaathagala hucchu nimma blog odidagalE nange sampoorna artha aagide :)
Dhanyavadagalu abhimaanakke :)

Vidya Daithota said...

Kannugalalle
nodideya Jalapatha
Thangi....
Kannu Kannagithe
illa..
Maiyella kannagi
kodiyodedu banthe
kavanavagi....????

shivu.k said...

ಮೇಡಮ್,
ಜಲಪಾತಗಳನ್ನು ನೋಡಿದಾಗ ಹೀಗೆ ಕವನ ಕತೆಗಳು ಹರಿದುಬರುತ್ತಿರುತ್ತವೆ. ಕಲ್ಪನೆ ಚೆನ್ನಾಗಿದೆ.
ನನ್ನ ಎರಡು ಬ್ಲಾಗಿನಲ್ಲಿ ಹೊಸ ಫೋಟೊಗಳು ಮತ್ತು ಲೇಖನಗಳನ್ನು ಹಾಕಿದ್ದೇನೆ. ಬಿಡುವು ಮಾಡಿಕೊಂಡು ಬನ್ನಿ...