Friday, March 07, 2008

ಆಸೆ

ಹೆಚ್ಚು ಓದಿಲ್ಲವಾದರೂ ಬರೆಯುವಾಸೆ
ಹೊಟ್ಟೆಯೊಳಗಿನ ಬೆಂಕಿ ಹೊರಹಾಕುವಾಸೆ
ಲಂಚಕೋರರ ಸಂಚ ಬಯಲಿಗೆಳೆಯುವಾಸೆ
ಬಡಪಾಯಿಗಳ ಬೆನ್ನೆಲುಬಾಗುವಾಸೆ
ರಕ್ಷಕಳಾಗಿ ರಕ್ಷೆ ನೀಡುವಾಸೆ
ರಸ್ತೆಗಿಳಿದ ರಗಳೆಗಳ ಗುಡಿಸುವಾಸೆ
ದುಷ್ಟತನವ ಬಿಡಿಸಿ ತೊಳೆಯುವಾಸೆ
ದೃಷ್ಟಿಹೀನರಿಗೊಂದು ದೀಪವಾಗುವಾಸೆ
ಮಾತೆಯಿಲ್ಲದ ಮಗುವಿಗೊಂದು ಮಮತೆಯಾಗುವಾಸೆ
ಆ ಮಗುವಿನೊಂದಿಗೆ ನಾನೂ ಒಂದು ಮಗುವಾಗುವಾಸೆ


heccu OdillavAdarU bareyuvAse
hoTTeyoLagina beMki hora hAkuvAse
laMcakOrara saMca bayaligeLeyuvAse
baDapAyigaLa bennelubAguvAse
rakShakaLAgi rakShe nIDuvAse
rastegiLida ragaLegaLa guDisuvAse
duShTatanava biDisi toLeyuvAse
dRuShTihInarigoMdu dIpavAguvAse
mAteyallada maguvige mamateyAguvAse
A maguvinoDane nAnU oMdu maguvAguvAse.

1 comment:

shivu.k said...

ಅನ್ನಪೂರ್ಣ ಮೇಡಮ್,
ನಿಮ್ಮ ಆಸೆಗಳೆಲ್ಲಾ ಈಡೇರಲಿ...ಹೀಗೆ ಬರೆಯುತ್ತಿರಿ.
ನನ್ನ ಛಾಯಾಕನ್ನಡಿ ಬ್ಲಾಗಿಗೊಮ್ಮೆ ಬೇಟಿ ಕೊಡಿ ಅಲ್ಲಿರುವ ಫೋಟೊಗಳು ಮತ್ತು ಲೇಖನಗಳು ನಿಮಗಿಷ್ಟವಾಗಬಹುದು.