Friday, March 07, 2008

ಭಾವಗತಿ

ಕನಸು ಕಾಣುವೆನೆಂದರೂ 
ಕಣ್ಣುಗಳು ಮುಚ್ಚುತ್ತಿಲ್ಲ

ಮಲಗಿ ಮರೆಯೋಣವೆಂದರೂ 
ಮನದ ಪುಟಗಳು ಬಿಡುತ್ತಿಲ್ಲ

ಯಾಕಿಂಥಾ ನಿರಾಸೆ, ಭ್ರಮನಿರಸನ ! 
ಇರದಿರುವುದರ ಬಯಸಿ ಇರುವುದರ ಅವಸಾನ !

ಬದುಕು ಬಣ್ಣದ ಚಿತ್ತಾರ ನಿಜ, 
ಕಪ್ಪು ಬಣ್ಣದೊತ್ತು ಹೆಚ್ಚಾದರೆ ಉಳಿದುದಕ್ಕೆಲ್ಲಾ ರಜ

ಉದಿಸಿದರೆ ಕತ್ತಲೆಯ ಕದದಲ್ಲೊಂದು ಪ್ರಣತಿ,
ತುಂಬುವುದು ಜೀವಕೊಂದು ಭಾವಗತಿ

kanasu kANuveneMdarU kaNNugaLu muccuttilla
malagi mareyONaveMdarU manada puTagaLu biDuttilla
yAkiMthA nirAse, Bramanirasana ! iradira bayasi iruvudara avasAna !

baduku baNNada cittAra nija, kappu baNNadottu heccAdare uLidudakkellA raja
udisidare kattaleya kadadalloMdu praNati, tuMbuvudu jIvakoMdu BAvagati

2 comments:

ವಿಜಯ್ ಜೋಶಿ said...

ಅನ್ನಪೂರ್ಣಾ,
ನನ್ನ ಬ್ಲಾಗಿಗೆ ಬಂದು, ನಾನು ಬರೆದದ್ದನ್ನು ಓದಿ, ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಕ್ಕೆ ದನ್ಯವಾದಗಳು.
ನಿಮ್ಮ ಕವನ ಚೆನ್ನಾಗಿದೆ. ಹಾಗೇ, ಆಗಾಗ ಒಮ್ಮೆ ನನ್ನ ಬ್ಲಾಗಿಗೆ ಭೇಟಿ ನೀಡುತ್ತಿರಿ.

Ranjana H said...

good one annapurna..

ranjana

ranjanah.blogspot.com
ranjanahegde.wordpress.com