ಇಂದು ಊಟಕ್ಕೆ ಸಾರು,
ಇದನು ಕೇಳಿದವರು ಯಾರು
ತಿಂದು ಉಪ್ಪು ಕಮ್ಮಿ ಎಂದು
ಹೇಳಿದವರು ಯಾರು
ಬಂದು ನಿಂದು ಬೆಂದು
ಜೊತೆಗೂಡಿದವರು ಯಾರು
ಎಂದು ನೀ ಸಾರು,
ಬೇಕಾದರೆ ಬೇಗ ಬಳಿಸಾರು
ಊಟದಲ್ಲಿ ಖಚಿತ ಉಚಿತ ನಾರು
ಇಲ್ಲವೆಂದು ಗೊಣಗಿದವರು ಯಾರು
ಕಷ್ಟ ಗೊತ್ತಿಲ್ಲದಿರುವುದಕ್ಕೇ ಕೊಳಕು ನಾರು
ಬೇಡ ಬರೀ ಒಣ ಮಾತಿನ ದರ್ಬಾರು
No comments:
Post a Comment