Friday, November 17, 2023

ಮತ್ತೆ ಸಿಗದು


ಅಪ್ಪ ಇಲ್ಲ ಅಮ್ಮ ಇಲ್ಲ 

ಇದ್ದಾಗ ಬೆಲೆ ಕೊಡಲಿಲ್ಲ 

ಪ್ರೀತಿ ಮಮತೆ ಸಾಲಲಿಲ್ಲ 

ಈಗ ಪಡೆವ ಭಾಗ್ಯವಿಲ್ಲ


ಕೊಟ್ಟ ಕಿರುಕುಳ ಕಮ್ಮಿ ಇಲ್ಲ 

ಪಶ್ಚಾತ್ತಾಪ ಪಟ್ಟೇ ಇಲ್ಲ 

ನಿನಗದರ ಅರಿವೇ ಇಲ್ಲ 

ಅವರು ತಿಳಿಯಗೊಡಲಿಲ್ಲ


ಅವರ ಮನವ ಅರಿಯಲಿಲ್ಲ

ಜೊತೆಗೆ ಸಮಯ ಕಳೆಯಲಿಲ್ಲ

ಪ್ರೀತಿಯಂತೂ ತೋರಲಿಲ್ಲ

ಮಾತು ಕೂಡ ಆಡಲಿಲ್ಲ


ವಾಸ್ತವವ ಗ್ರಹಿಸಲಿಲ್ಲ

ತಕ್ಷಣ ಎಚ್ಚೆತ್ತುಕೊಳಲಿಲ್ಲ 

ಕಳಕೊಂಡ ಮೇಲೆ ಅವರೇ ಎಲ್ಲಾ

ಆದರೇನೂ ಫಲವಿಲ್ಲ

2 comments:

Anonymous said...

ಅಂತರಾಳ ಮಿಡಿದು ನುಡಿವ ಸತ್ಯ.
ಪ್ರತಿಯೊಂದು ಜೀವಕೂ ಅರಿವಿಗೆ ಬರುವ ಸತ್ಯ.
ಅರಿತರೂ ನಿಸ್ಸಹಾಯಕರಾಗುವುದಂತೂ......
ನೂರಕ್ಕೆ ನೂರಲ್ಲ...ನೂರೊಂದು ಪ್ರತಿಶತ ಸತ್ಯ
ಮಗುವೇ ಮನುಜನೀ ಕಟು ಸತ್ಯ ವನು ಪೀಳಿಗೆಗೆ ಸಾರಿ ಸಾರಿ ಹೇಳುತಲೇ ಇದ್ದರೂ ಅವರ ಕಿವಿಗಳಿಗೆ ಬೀಳದೇ ಹೋಗುವ ನತ್ಯ ಸತ್ಯ....

Annapoorna Daithota said...

ಹೌದು, ಈ ಸತ್ಯ ಅರಿವಿಗೆ ಬರುವುದೇ ಸಮಯ ಮೀರಿದ ಮೇಲೆ.