ಬರೆಯುವುದು ಬಯಕೆಯಲ್ಲ
ಬಯಕೆಯಲ್ಲಿ ಅರ್ಥವಿಲ್ಲ
ಅರ್ಥ ಹುಡುಕಿದರೆ ವ್ಯರ್ಥವೆಲ್ಲ
ವ್ಯರ್ಥವೆಂದು ಬಿಡುವುದಿಲ್ಲ
ಬಿಟ್ಟರೆಂದೂ ಬರೆಯುವುದಿಲ್ಲ
ಬರೆವಣಿಗೆಯ ಎರವಣಿಯಲ್ಲಿ
ಎರವಣಿಯ ಪುರವಣಿಯೊಂದಿಗೆ
ಉರವಣೆಯ ಮೆರವಣಿಗೆಯಲ್ಲಿ
ಮೆರವಣಿಗೆಯ ಬರವಣಿಗೆ ಮುಂದುವರಿವುದು
ಬರೆಯುವುದಕ್ಕೆ ಬರವೇನು
ಬರದಿದ್ದರೂ ಬರೆದೇನು
ಬರೆದರೇನು ಬರೆಯದಿದ್ದರೇನು
ಯಾವುದನ್ನೂ ಲೆಕ್ಕಿಸದೇ ಬರೆಯುವೆನು
No comments:
Post a Comment