ಬೆಳಕಿನಲ್ಲಿ ಬವಳಿದಂತೆ ಕುಳಿತಿರುವ ಕಂದ
ಬೆದರ ಬೇಡ ಬೆನ್ನಿಗಿಹುದು ಅಭಯ ಕಬಂಧ
ಬೆಳಗು ನೀ ನಂದಾದೀಪ ಆನಂದದಿಂದ
ಅಂಕೆಯಿಲ್ಲದ ಸಂಖ್ಯೆಯಲ್ಲಿ ಮಿರುಗುವ ಚಂದ
ಕಪ್ಪು ಕತ್ತಲ ತೊಳೆದಿರುವ ದೀಪಗಳ ಪ್ರಬಂಧ
ಘಮಘಮಿಸುವುದು ಸುತ್ತಲೆಲ್ಲ ಪವಿತ್ರ ಶ್ರೀಗಂಧ
ಆಗಸದಲ್ಲಿ ಹರಡಿರುವ ಹುಣ್ಣಿಮೆಯ ಅಂದ
ಪಡೆದದನು ಬೆಳಗಲಿ ನಿನ್ನ ವದನಾರವಿಂದ
No comments:
Post a Comment