ಉಂಡ ಮೇಲೆ ಕುಡಿಯಿರಿ ಬಿಸಿಬಿಸಿ ನೀರು ಹಾಲು
ಹೊಟ್ಟೆಯುಬ್ಬರ ಶಮನದಲ್ಲಿ ಇದಕೆ ಸಿಂಹಪಾಲು
ಚಿಟಿಕೆ ಓಮ ಸೇರಿಸಿದರೆ ನಿವಾರಿಸುವುದು ಸವಾಲು
ಆಗಲು ಬಿಡದು ನಿಮ್ಮನ್ನು ಎಂದಿಗೂ ಕಂಗಾಲು
ಸುಖ ನಿದ್ರೆ ನಿಮ್ಮದೇ ನಿತ್ಯ ಇರುಳು
ಸಂತೋಷದ ಕ್ಷಣಗಳು ನಿಮಗೆ ಸಾಲುಸಾಲು
ಶುಚಿಯಾಗಿ ಇಟ್ಟುಕೊಳ್ಳಿ ನಿಮ್ಮ ಕೈ-ಕಾಲು
ಆರೋಗ್ಯ ಉಳಿಸುವಲ್ಲಿ ಇದರದು ಸಮಪಾಲು
No comments:
Post a Comment